top of page

ಕೃಷಿ ತರಬೇತಿ ಕಾರ್ಯಗಾರಕ್ಕೆ ಹರಪನಹಳ್ಳಿ ರೈತರಿಗೆ ಅಹ್ವಾನ.

  • Writer: newsnowvijayanagar
    newsnowvijayanagar
  • Feb 15
  • 1 min read

ವಿಜಯನಗರ(ಹೊಸಪೇಟೆ) ಫೆ,15: ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು,ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು, ಜಲ ಮರು ಪೂರಣ ಕುರಿತು ಆಸಕ್ತ ರೈತರಿಗೆ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಸಿ.ಆರ್.ಅಭಿಲಾಷ ತಿಳಿಸಿದ್ದಾರೆ.


ಅಟಲ್ ಭೂಜಲ ಯೋಜನೆ ಅಡಿ ಸಮುದಾಯ ಸಹಭಾಗಿತ್ವದಲ್ಲಿ ಫೆ.18 ಬೆ.10 ಗಂಟೆಗೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಲಾಗಿದೆ. ಹರಪನಹಳ್ಳಿ ತಾಲೂಕಿನಿಂದ 50 ಜನ ರೈತ, ರೈತ ಮಹಿಳೆಯರು ಭಾಗವಹಿಸಲು ಅವಕಾಶವಿದೆ. ತರಬೇತಿಯಲ್ಲಿ ಭಾಗವಹಿಸುವವರು ಮೊ. 6360139316 ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Comments


bottom of page