top of page

ಹರಪನಹಳ್ಳಿ ಸಮಗ್ರ ಅಭಿವೃದ್ಧಿಗೆ 371ಜೆ ಯಿಂದ ಕಲ್ಯಾಣ,ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರ್ಪಡೆಯ ದೂರದೃಷ್ಟಿ ಸ್ಮರಣೀಯ: ಲತಾ ಮಲ್ಲಿಕಾರ್ಜುನ್

  • Writer: newsnowvijayanagar
    newsnowvijayanagar
  • Feb 19
  • 2 min read

ವಿಜಯನಗರ(ಹೊಸಪೇಟೆ), ಫೆ.18:ಹರಪನಹಳ್ಳಿ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರ್ಪಡೆಗೊಂಡ ಹಿನ್ನಲೆಯಲ್ಲಿ 371ಜೆ ಅನುದಾನ ಲಭ್ಯತೆಯಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.


ಪಟ್ಟಣದಲ್ಲಿ ಶಾಸಕರ ಅನದಾನದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿ.ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ನ್ಯಾಯಯುತವಾಗಿ ಅನುದಾನ ತರುವ ಪ್ರಯತ್ನ ನಿರಂತರವಾಗಿದೆ.ಸಹೋದರ ಎಂ.ಪಿ.ರವೀಂದ್ರರವರ ದೂರದೃಷ್ಟಿ ಯೋಚನೆಯಿಂದಾಗಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿದ್ದ ಹರಪನಹಳ್ಳಿಯನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ತಂದ ಹಿನ್ನಲೆಯಲ್ಲಿ ಕೆಕೆಆರ್‌ಡಿಬಿಯ 371ಜೆ ವಿಶೇಷ ಅನುದಾನದಿಂದ 5 ಕೋಟಿ ರೂ ವೆಚ್ಚದಲ್ಲಿ 11 ನೂತನ ಬಸ್‌ಗಳನ್ನು ಹರಪನಹಳ್ಳಿ ಡಿಪೋಗೆ ನೀಡಲು ಸಾಧ್ಯವಾಗಿದೆ. ಕ್ಷೇತ್ರದಲ್ಲಿನ ವಿದ್ಯಾರ್ಥಿಗಳ ಸಂಚಾರಕ್ಕೆ ಇದ್ದ ಸಮಸ್ಯೆಗೆ ಪರಿಹಾರವಾಗಿ ಬಸ್ ಖರೀದಿಸಲು ಸ್ಪೂರ್ತಿಯಾಗಿದೆ. ಕ್ಷೇತ್ರದಲ್ಲಿನ 223 ಹಳ್ಳಿಗಳಿಗೂ ಬಸ್ ಸಾರಿಗೆ ಸಂಪರ್ಕ ಕಲ್ಪಿಸಲಾಗುವುದು.ಶೀಘ್ರದಲ್ಲಿ ಹರಪನಹಳ್ಳಿ ಪಟ್ಟಣಕ್ಕೆ 6 ಸಿಟಿ ಬಸ್ ವ್ಯವಸ್ಥೆ ಕಲ್ಪಿಸಲು ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.ಗ್ರಾಮೀಣ ಭಾಗದಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು, ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ರಸ್ತೆಗಳ ದುರಸ್ಥಿ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ಸಾಮಾನ್ಯ ಜನರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರಿತು ಕೆಲಸ ಮಾಡುವ ಸಾಮರ್ಥ್ಯ ನನಗಿದೆ, ಆದರೆ ಸಹನಾ ಶಕ್ತಿ ನನ್ನ ಜನತೆಗಿರಲಿ ಎಂದರು.


ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಹರಪನಹಳ್ಳಿ ಶಾಸಕರ ಕಾಳಜಿಯಿಂದಾಗಿ 5 ಕೋಟಿ.ರೂ ವೆಚ್ಚದಲ್ಲಿ ತಾಲೂಕಿನ ಸಾರಿಗೆ ಘಟಕಕ್ಕೆ ನೂತನ 11 ಬಸ್‌ಗಳನ್ನು ನೀಡಿರುವುದು ಶ್ಲಾಘನೀಯ. ಅನುದಾನ ನೀಡಿದ ಕೇವಲ ಮೂರು ತಿಂಗಳಲ್ಲೇ ಬಸ್‌ಗಳನ್ನು ಡಿಪೋಗೆ ನೀಡುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಶಾಸಕರು ಶಾಲಾ ಮಕ್ಕಳಿಗೆ ಬಸ್ ಕೊರತೆಗೆ ಸ್ಪಂದಿಸಿ ಬಸ್ ಖರೀದಿಗೆ ಮುಂದಾಗಿರುವುದು ಅವರಲ್ಲಿರುವ ಮಾನವೀಯ ಮೌಲ್ಯಗಳಿಗೆ ನೀಡಿರುವ ಆದ್ಯತೆ ಆಗಿದೆ. ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿಗೆ ಬಲ ನೀಡಿದಂತಾಗಿದೆ. ಹರಪನಹಳ್ಳಿ ತಾಲೂಕಿನಿಂದಲೇ ದಿನನಿತ್ಯ 14 ಸಾವಿರ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ದರವನ್ನು ಸರ್ಕಾರ ಕೆಎಸ್‌ಆರ್‌ಟಿಸಿಗೆ ಭರಿಸುತ್ತಿರುವುದರಿಂದ ನಷ್ಟದಲ್ಲಿದ್ದ ಕೆಎಸ್‌ಆರ್‌ಟಿಸಿಗೆ ಶಕ್ತಿ ನೀಡಿದಂತಾಗಿದೆ ಎಂದರು.

ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದರು.


ree

ತಾಲೂಕಿನ ಶೃಂಗಾರ ತೋಟದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ಆವರಣದಲ್ಲಿ ನಿರ್ಮಿತವಾಗುತ್ತಿರುವ ಹಾಸ್ಟೆಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ದೇವರಾಜ ಅರಸ್ ನಿಗಮದಿಂದ ಅರ್ಹ 36 ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ ವಿತರಿಸಿದರು. ಪುರಸಭೆಯಿಂದ ಪಲಾನುಭವಿಗಳ ಮನೆ ಬಾಗಿಲಿಗೆ ಇ-ಸ್ವತ್ತು ಪ್ರಮಾಣ ಪತ್ರ ವಿತರಿಸಿದರು.ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ ವಿತರಿಸಿದರು. ಮಾಡ್ಲಗೇರಿ ಗ್ರಾಪಂ ವ್ಯಾಪ್ತಿಯ ವಸತಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಫಾತಿಮಾ ಶೇಕ್ಷಾವಲಿ,ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್,ಪುರಸಭೆ ಸದಸ್ಯರಾದ ರಾಮಣ್ಣ,ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ,ಪುರಸಭೆ ಸದಸ್ಯ ಎಂ.ವಿ.ಅಂಜಿನಪ್ಪ, ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು, ಬಿಇಒ ಲೇಪಾಕ್ಷಪ್ಪ, ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷರಾದ ಉದಯಶಂಕರ್, ಹೊಸಪೇಟೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

Recent Posts

See All
ಕೃಷಿ ತರಬೇತಿ ಕಾರ್ಯಗಾರಕ್ಕೆ ಹರಪನಹಳ್ಳಿ ರೈತರಿಗೆ ಅಹ್ವಾನ.

ವಿಜಯನಗರ(ಹೊಸಪೇಟೆ) ಫೆ,15: ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು,ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು, ಜಲ ಮರು...

 
 
 

Comments


bottom of page