top of page

4.ಲಕ್ಷ ರೂ. ಮೌಲ್ಯದ 30 ಮೊಬೈಲ್ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

  • Writer: newsnowvijayanagar
    newsnowvijayanagar
  • May 23
  • 1 min read


ree

ವಿಜಯನಗರ : ಹರಪನಹಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ, ಸಂತೆ ಮಾರುಕಟ್ಟೆ ಹಾಗು ಇತರೆಡೆ ಮೊಬೈಲ್ ಗಳನ್ನು ಕಳೆದುಕೊಂಡ ಬಗ್ಗೆ ಸಾರ್ವಜನಿಕರು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ದಾಖಲಿಸಿದ್ದು, ಹರಪನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ. ಶಂಭುಲಿಂಗ ಸಿ. ಹಿರೇಮಠ ರವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯವರಾದ ಶ್ರೀ. ಕೆ.ಎಂ. ಆನಂದ, ಸಿ.ಪಿ.ಸಿ. ನಾಗರಾಜ ಸಿ.ಪಿ.ಸಿ ಠಾಣಾ ಬರಹಗಾರ ಕೆ.ಹೆಚ್.ಎಂ.ರಾಜಶೇಖರ, ಗಣಕಯಂತ್ರ ಕರ್ತವ್ಯ ನಿರ್ವಹಿಸುವ ಶ್ರೀ. ಗುರುಪ್ರಸಾದ್ ಸಿ.ಪಿ.ಸಿ. ಹಾಗು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸಿ.ಡಿ.ಆರ್. ವಿಭಾಗದಲ್ಲಿ ಕೆಲಸ ಮಾಡುವ . ಕುಮಾರ ನಾಯ್ಕ ರವರು ಗಳು ಸಿ.ಇ.ಐ.ಆರ್. ತಂತ್ರಾಂಶದ ಸಹಾಯದಿಂದ ಒಟ್ಟು 30 ಮೊಬೈಲ್ ಗಳು ಅಂದಾಜು ಬೆಲೆ ರೂ. 4 ಲಕ್ಷ ಪತ್ತೆ ಹಚ್ಚಿ ದಿನಾಂಕ 22-05-2025 ರಂದು ವೆಂಕಟಪ್ಪ ನಾಯಕ, ಡಿ.ಎಸ್.ಪಿ. ಹರಪನಹಳ್ಳಿ ಶ್ರೀ. ಮಹಾಂತೇಶ ಸಜ್ಜನ್ ಸಿ.ಪಿ.ಐ. ಹರಪನಹಳ್ಳಿ ರವರ ಮೂಲಕ ಸಾರ್ವಜನಿಕರಿಗೆ ಮೊಬೈಲ್ ಗಳನ್ನು ಒಪ್ಪಿಸಿದ್ದು, ಸದರಿ ಮೊಬೈಲ್ ಗಳನ್ನು ಪತ್ತೆಹಚ್ಚಲು ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಎಸ್.ಪಿ. ಸಾಹೇಬರು ವಿಜಯನಗರ, ಮಾನ್ಯ ಡಿ.ಎಸ್.ಪಿ. ಸಾಹೇಬರು ಹರಪನಹಳ್ಳಿ ಹಾಗು ಮಾನ್ಯ ಸಿ.ಪಿ.ಐ. ಸಾಹೇಬರು ಹರಪನಹಳ್ಳಿ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Comments


bottom of page