top of page

ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ.

  • Dec 2, 2024
  • 1 min read

Updated: Dec 4, 2024

ವಿಜಯನಗರ(ಹೊಸಪೇಟೆ)ಡಿ.02,ನಗರದ ಒಳಾಂಗಣ ಕ್ರೀಡಾ ಸಭಾಂಗಣದಲ್ಲಿ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಘೋಷ ವಾಕ್ಯದೊಂದಿಗೆ ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲೆ ಇವರ ಸಹಯೋಗದಲ್ಲಿ ಎಸ್. ಡಿ. ಎಂ. ನಾರಾಯಣ ಹಾರ್ಟ್ ಸೆಂಟರ್, ಅಶ್ವಿನಿ ಕಣ್ಣಿನ ಆಸ್ಪತ್ರೆ, ಬಸವ ಅಕ್ಯು ಅಕಾಡೆಮಿ,ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ಕನ್ನಡ ಸಾಂಸ್ಕೃತಿಕ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ree

ಕಾರ್ಯಕ್ರಮದ ಪ್ರಾರಂಭದಲ್ಲಿ ಅಂಜಲಿ ಭರತನಾಟ್ಯ ತಂಡದವರಿಂದ ಹಚ್ಚೇವು ಕನ್ನಡದ ದೀಪ ಎನ್ನುವ ಹಾಡಿಗೆ ನೃತ್ಯವನ್ನು ಪ್ರದರ್ಶಿಸಿದರು.

ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎನ್ ಮಹಮ್ಮದ್ ಇಮಾಮ್ ನಿಯಜಿರವರು ಮಾತನಾಡಿ, ಕರ್ನಾಟಕದಲ್ಲಿ

ಕನ್ನಡಿಗನೇ ಸಾರ್ವಭೌಮ, ಕನ್ನಡ ನಾಡು,ನುಡಿ,ನೆಲ, ರಕ್ಷಣೆಗಾಗಿ ನಾವು ನೀವೆಲ್ಲರೂ ಸದಾ ಸನ್ನದ್ಧರಾಗಿರೋಣ. ಹಾಗೂ ಇಂದಿನ ಅತ್ಯಾಧುನಿಕ ಯುಗದಲ್ಲಿ ಕೆಲಸದ ಒತ್ತಡಗಳ ನಡುವೆಯೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಎಷ್ಟೇ ಐಶ್ವರ್ಯ ಸಂಪತ್ತನ್ನು ಹೊಂದಿದ್ದರು ಸಹ ಕೊನೆವರೆಗೂ ನಮ್ಮೊಂದಿಗೆ ಇರುವುದು ಈ ದೇಹ ಮಾತ್ರ. ಅದ್ದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ನಮಗೆ ನಾವೇ ಎಚ್ಚರವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಈ ಒಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹೊಸಪೇಟೆ ಸಮಸ್ತ ನಾಗರಿಕರು ಸದುಪಯೋಗಪಡಿಸಿ ಕೊಳ್ಳಬೇಕೆಂದು ಎಂದರು.

ಬಳಿಕ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ 130 ಜನ ಹೃದಯ ತಪಾಸಣೆ, 50 ಕ್ಕೂ ಹೆಚ್ಚು ಜನ ಕಣ್ಣಿನ ತಪಾಸಣೆ ಮತ್ತು 100 ಕ್ಕೂ ಹೆಚ್ಚು ಜನ ಫಿಜಿಯೋಥೆರಪಿ ತಪಾಸಣೆ ಮಾಡಿಸಿಕೊಂಡರು. ವೇದಿಕೆಯಲ್ಲಿ ಈಶ್ವರ ನಾಯಕ್ ಉತ್ತರ ಕರ್ನಾಟಕ ಜನಪದ ವೇದಿಕೆ ಸಂಸ್ಥಾಪಕರು ಜೈ ಗದಾಕೇಸರಿ ನಟ ಹಾಗೂ ಸಹ ನಿರ್ಮಾಪಕರು ಹಾಗೂ ಪಿ ವೆಂಕಟೇಶ್ ಅಧ್ಯಕ್ಷರು ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಇವರು.ಪ್ರಶಸ್ತಿಗಳನ್ನು ವಿತರಿಸಿದರು

ಈ ಸಂಧರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ‌ ಡಾ.ಬಸವರಾಜ, ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿರುಪಾಕ್ಷ ಗೌಡ ಹೇರೂರು, ಉತ್ತರ ಕರ್ನಾಟಕದ ಅಧ್ಯಕ್ಷ ಹಾಗೂ ವಿಜಯನಗರ ಜಿಲ್ಲಾ ಅಧ್ಯಕ್ಷ ರಾಘು ಗುಜ್ಜಲ್,ಉಪಾಧ್ಯಕ್ಷ ಕಟಿಗಿ ಕಿರಣ, ಗುಜ್ಜಲ್ ಗಣೇಶ್, ಭರತನಾಟ್ಯ ಕಲಾವಿದೆ ಅಂಜಲಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Comments


bottom of page