top of page

ಯುವಕನ ಬರ್ಬರ ಹತ್ಯೆ: ಕೊಲೆ ಆರೋಪಿ ಕಾಲಿಗೆ ಗುಂಡೇಟು

  • Writer: newsnowvijayanagar
    newsnowvijayanagar
  • Apr 11
  • 1 min read

ವಿಜಯನಗರ(ಹೊಸಪೇಟೆ) ನಗರದ ಜಂಬುನಾಥ ರಸ್ತೆ ಹೊರವಲಯದಲ್ಲಿ ಬುಧವಾರ ರಾತ್ರಿ ನಡೆದ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಹೊನ್ನೂರ ಸ್ವಾಮಿ (28) ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣದಲ್ಲಿ ಮೂರು ವಿಶೇಷ ತಂಡ ರಚಿಸಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಈ ಕೃತ್ಯ ನಡೆದ ನಂತರದಲ್ಲಿ ರಿಕವರಿ ವೇಳೆ ಆರೋಪಿ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಕಾಳಪ್ಪ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದು ಬಂಧಿಸಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಶ್ರೀಹರಿಬಾಬು ಪತ್ರಿಕಾಗೋಷ್ಠಿಯಲ್ಲಿ ಮೂಲಕ ತಿಳಿಸಿದ್ದಾರೆ.

ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ನಗರದ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರದಲ್ಲಿ ಬುಧವಾರ ರಾತ್ರಿ 10 ಗಂಟೆಗೆ ಹೊನ್ನೂರಸ್ವಾಮಿ(28) ಎನ್ನುವ ವ್ಯಕ್ತಿಯನ್ನು ಕಾಳಿ ಅಲಿಯಾಸ್ ಹುಚ್ಚು ಕಾಳಿ (30) ಎನ್ನುವವನು ಚಾಕು ಇರಿದು ಕೊಲೆ ಮಾಡಿದ್ದಾನೆ. ಕೊಲೆಯಾದ ಹೊನ್ನುರಸ್ವಾಮಿ ದಾವಣಗೆರೆಯಲ್ಲಿ ವಾಸವಾಗಿದ್ದ.ಜಂಬುನಾಥ ಜಾತ್ರೆಯ ಸಲುವಾಗಿ ಹೊಸಪೇಟೆಗೆ ಬಂದಿದ್ದ.ಹಳೇ ದ್ವೇಷ ಹಿನ್ನೆಲೆಯಲ್ಲಿ ಹುಚ್ಚುಕಾಳಿ ಹೊನ್ನೂರಸ್ವಾಮಿಯನ್ನು ಹಲವಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಲೆ ಬೀಸಿ ಆರೋಪಿಯನ್ನು ಬುಧವಾರ ಮಧ್ಯರಾತ್ರಿ ಸೆರೆ ಹಿಡಿಯಲಾಗಿದೆ.ಬಳಿಕ ಕೃತ್ಯಕ್ಕೆ ಬಳಸಿದ ಆಯುಧ ಬಚ್ಚಿಟ್ಟಿರುವ ಕುರಿತು ಆರೋಪಿಯಿಂದ ಮಾಹಿತಿ ಪಡೆಯಲಾಗಿದೆ.ಇದನ್ನು ರಿಕವರಿ ಮಾಡಲು ತೆರಳಿ ನಂತರ ವಾಪಸ್ ಬರುವಾಗ ಆರೋಪಿ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾನೆ.

ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸರಾದ ಲಿಂಗರಾಜ ಮತ್ತು ಕೊಟ್ರೇಶ ಎಂಬುವವರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.ಎಚ್ಚರಿಕೆ ಕೊಟ್ಟರೂ ಸುಮ್ಮನಾಗದ ಕಾರಣ ಪಿಐ ಹುಲುಗಪ್ಪ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

2021ರಲ್ಲಿ ಹೊನ್ನೂರಸ್ವಾಮಿ ಮತ್ತು ಹುಚ್ಚುಕಾಳಿ ನಡುವೆ ಜಗಳವಾಗಿತ್ತು. ಆಗ ಇಬ್ಬರ ಮೇಲೆ ಪ್ರಕರಣ ದಾಖಲಾಗಿ ಕೊಲೆ ಯತ್ನವೂ ನಡೆದಿತ್ತು. ದೂರು ಪ್ರತಿದೂರು ದಾಖಲಾಗಿರೋ ಬಗ್ಗೆ ಮಾಹಿತಿ ಇದೆ. ಅದನ್ನು ಕೂಡ ತನಿಖೆ ಮಾಡುತ್ತೇವೆ ಎಂದರು.

Comments


bottom of page