top of page

ಏಷ್ಯನ್ ಗೇಮ್ಸ್ 2023: ಬೋಪಣ್ಣ, ಭೋಸಲೆ ಭರ್ಜರಿ ಕಂಬ್ಯಾಕ್, ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತಕ್ಕೆ ಸ್ವರ್ಣ ಪದಕ

  • Nov 14, 2024
  • 1 min read

ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಪದಕಗಳ ಭೇಟೆ ಮುಂದುವರೆದಿದ್ದು, ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಜೋಡಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.










ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಪದಕಗಳ ಭೇಟೆ ಮುಂದುವರೆದಿದ್ದು, ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಜೋಡಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.

ಮೊದಲ ಸೆಟ್‌ನಲ್ಲಿ ಸೋತ ನಂತರ ಫೈನಲ್ ನಲ್ಲಿ ಭರ್ಜರಿ ಕಂಬ್ಯಾಕ್ ಮಾಡಿ ಭಾರತದ ಜೋಡಿ, ಚೈನೀಸ್ ತೈಪೆಯ ಲಿಯಾಂಗ್ ಎನ್-ಶುವೊ ಮತ್ತು ತ್ಸುಂಗ್-ಹಾವೊ ಹುವಾಂಗ್ ವಿರುದ್ಧ  2-6, 6-3, 10-4 ಸೆಟ್ ಗಳಿಂದ ಗೆದ್ದು ಸ್ವರ್ಣ ಪದಕ ಜಯಿಸಿತು.

ಇದಕ್ಕೂ ಮುನ್ನಾ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರ ಜೋಡಿ, ಚೈನೀಸ್ ತೈಪೆಯ ಯು- ಹಸಿಯು ಹ್ಸು ಮತ್ತು ಹಾವೊ- ಚಿಂಗ್ ಚಾಂಗ್ ವಿರುದ್ಧ 6-1,3-6, 10-4 ಸೆಟ್ ಗಳಿಂದ ಗೆಲುವು ಸಾಧಿಸಿತ್ತು.

ಹಿಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡ ತಲಾ ಎರಡು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಒಳಗೊಂಡಂತೆ ಒಟ್ಟು ಆರು ಮಿಶ್ರ ಡಬಲ್ಸ್ ಪದಕಗಳನ್ನು ಗೆದ್ದಿದೆ.

Comments


bottom of page