top of page

ಅಂದಿಗಾಲೀಶ ಗುಡ್ಡದಲ್ಲಿ ಸುದರ್ಶನ ಹೋಮ

  • Writer: newsnowvijayanagar
    newsnowvijayanagar
  • Jan 31
  • 1 min read

ಕೊಪ್ಪಳ: ಜಿಲ್ಲೆಯ ಅಗಳಕೇರಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಪದಾಧಿಕಾರಿಗಳು ಲೋಕ ಕಲ್ಯಾಣಾರ್ಥವಾಗಿ ಐತಿಹಾಸಿಕ ಶ್ರೀ ಅಂದಿಗಾಲೀಶ ಗುಡ್ಡದಲ್ಲಿ ಗಣಪತಿ ಹೋಮ, ಸುದರ್ಶನ ಹೋಮ ಮತ್ತು ಪವಮಾನ ಹೋಮ ನೆರವೇರಿಸಿದರು.


ಮೌನಿ ಅಮಾವಾಸ್ಯೆ ಪ್ರಯುಕ್ತ ಗುಡ್ಡದ ಶ್ರೀ ಅಂದಿಗಾಲೇಶ್ವರನ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಹೋಮಗಳನ್ನು ನೆರವೇರಿಸಿ ಜಗತ್ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.


ಹೊಸಪೇಟೆಯ ಶಂಕರ್ ಭಟ್ ಇವರ ನೇತೃತ್ವದಲ್ಲಿ ಅಗಳಕೇರಿ ಗ್ರಾಮದ ಶ್ರೀ ಅಂದಿಗಾಲೇಶ್ವರ ಸೇವಾ ಸಮಿತಿ ಇವರು ಆಯೋಜಿಸಿದ್ದ ಈ ಹೋಮ ಯಜ್ಞ ಕಾರ್ಯಕ್ರಮದಲ್ಲಿ ಸಂಘದ ನೂತನ ಅಧ್ಯಕ್ಷರಾದ ಕೆಂಚಪ್ಪ ಹಿಟ್ನಾಳ, ಉಪಾಧ್ಯಕ್ಷರಾದ ವಲಿಸಾಬ್, ನಿರ್ದೇಶಕರಾದ ಪರಶುರಾಮ ವಡ್ಡರ್, ಮಾಲತೇಶ ಕೀರ್ತಿಗೌಡರ್, ಗುರುಬಸವರಾಜ ಅಳವಂಡಿ, ಹನುಮಂತಪ್ಪ ಸಿಂದೋಗಿ, ಗೀತಾ ಬಸವರಾಜ ಭಜಂತ್ರಿ, ರಾಜು ಹುಲುಗಪ್ಪ ಗಡಾದ್, ಮಂಜುನಾಥ ನಿಂಗಪ್ಪ ಕುರಿ ಶಹಪುರ, ಈಶಪ್ಪ ಬಿಸನಹಳ್ಳಿ ಮತ್ತು ಜಯಶ್ರೀ ಮಂಜುನಾಥ ಕನಕಗಿರಿ ಇವರು ಹೋಮ, ಹವನ ಯಜ್ಞ ಕಾರ್ಯದಲ್ಲಿ ಪಾಲ್ಗೊಂಡು ಲೋಕ ಕಲ್ಯಾಣಾರ್ಥ ಪ್ರಾರ್ಥಿಸಿದರು.


ಅಗಳಕೇರಿ, ಚಂದ್ರಗಿರಿ, ಶಹಪುರ, ಹಿಟ್ನಾಳ, ಶಿವಪುರ, ಕೆರೆಹಳ್ಳಿ, ಬೂದಗುಂಪ, ಗುಳದಳ್ಳಿ, ಲಿಂಗದಹಳ್ಳಿ ಮತ್ತು ವದ್ನಾಳ್ ಗ್ರಾಮದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ree


ಶ್ರೀ ಅಂದಿಗಾಲೇಶ್ವರ ಸೇವಾ ಸಮಿತಿಯ ಧುರೀಣರಾದ ಕೃಷ್ಣ ಗಡಾದ, ಮಂಜುನಾಥ ಶೆಟ್ಟರ್, ಬಸವರಾಜ ಕರ್ಕಿಹಳ್ಳಿ, ಪರಸಪ್ಪ ಗಮಣಿ, ವೀರಣ್ಣ ಕೋಮಲಾಪುರ ಸೇರಿದಂತೆ ಶ್ರೀ ಅಂದಿಗಾಲೀಶ ಸ್ವಾಮಿಯ ಭಕ್ತರು ಧಾರ್ಮಿಕ ಕಾರ್ಯಕ್ರಮಕ್ಕೆ ನೆರವಾದರು.

Comments


bottom of page