top of page

ಇಟಗಿ ಶ್ರೀ ನಾಗಚೌಡೇಶ್ವರಿ ಕ್ಷೇತ್ರದಲ್ಲಿ ಜ್ಯೇಷ್ಠ ಅಮಾವಾಸ್ಯೆ ಪೂಜೆ

  • Writer: newsnowvijayanagar
    newsnowvijayanagar
  • May 26
  • 1 min read
ree

ಕೊಪ್ಪಳ: ಮೇ, 26,ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ,ಇಟಗಿಯಲ್ಲಿ (ಕೂಕನೂರು) ಜ್ಯೇಷ್ಠ ಅಮಾವಾಸ್ಯೆ ಪೂಜೆ ೨೭ನೇ ಮೇ ೨೦೨೫ರ ಮಂಗಳವಾರ ಬೆಳಿಗ್ಗೆ ೧೧ ರಿಂದ ೪ ರವರೆಗೆ ಪೂಜೆ ಮತ್ತು ಪ್ರಸಾದ ವಿನಿಯೋಗ ವೈಶಾಖ ಮಾಸೆ ವಸಂತ ಋತು, ಉತ್ತರಾಯಣ ಕೃಷ್ಣ ಪಕ್ಷದ “ಅಮಾವಾಸ್ಯೆ ಪೂಜೆ”ಗೆ, ತಾವೆಲ್ಲರು ಸಹ-ಕುಟುಂಬ ಸಮೇತ ಆಗಮಿಸಿ, ಶ್ರೀ ನಾಗ ಚೌಡೇಶ್ವರಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಿ ಬೇಕಾಗಿ ಭಕ್ತರಲ್ಲಿ ವಿನಂತಿ.


ಬೆಂಗಳೂರಿನ ಶ್ರೀ ಗುಟ್ಟೇ ವೀರಾಂಜನೇಯ ಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕರು ಎ. ವೇಣುಗೋಪಾಲ್ ಮತ್ತು ಗೌತಮ್, ಮೈಸೂರಿನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು ಲಕ್ಷ್ಮಿ ನರಸಿಂಹ ಭಟ್ಟರ್, ಮುಂಬೈನ ರಮಣಪ್ರಸಾದ್ ಮಯೂರಮ್, ಪತ್ರಿಕಾ ಛಾಯಾಗ್ರಾಹಕ ದೇವೇಂದ್ರಕುಮಾರ್ ನಿಗಡೆ, ಸತ್ಯನರಾಯಣ ರೆಡ್ಡಿ, ನರಸಿಂಹ ಮೂರ್ತಿ,ದೀಪಕ್ ವಿ, ವಿನೋದ್, ಚಲನಚಿತ್ರ ನಟಿ ಮೀನಾ, ಭಾಗ್ಯಶ್ರೀ,



ಕರಾವಳಿ ಕಲಾವಿದ ರಾಜ್‌ಸಂಪಾಜೆ ಕುಟುಂಬದವರು ಮತ್ತು ಬೆಂಗಳೂರಿನ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಉಸ್ತುವಾರಿ ರಮೇಶ ಸುರ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂಜೆ, ಸೇವೆ ಮತ್ತು ಅಭಿವೃದ್ಧಿಗಾಗಿ ದಾನಿಗಳು, ನೋಂದಾಯಿಸಿಕೊಳ್ಳುವವರು ಮತ್ತು ಹೆಚ್ಚಿನ ಮಾಹಿತಿಗಾಗಿ : ರಮೇಶ ಸುರ್ವೆ ಸಂಚಾಲಕರು, ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ,ಇಟಗಿ, ನಂ. ೪೬೮, ೧೩ನೇ ಮುಖ್ಯರಸ್ತೆ, ೩ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ್ತೆ, ಮಂಜುನಾಥನಗರ, ಬೆಂಗಳೂರು-೫೬೦೦೧೦. ಮೊಬೈಲ್ : ೯೮೪೫೩೦೭೩೨೭ ನಂಬರ್‌ಗೆ ಸಂಪರ್ಕಿಸಬಹುದು.

ವಿಶೇಷ ಸೂಚನೆ :ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ.ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ.ಕಡ್ಡಾಯವಾಗಿ ಒಳಗಡೆ ಕಟ್ಟೆ ಹತ್ತಿ ಹೋಗಬಾರದೆಂದು ಮನವಿ ಮಾಡುತ್ತೇನೆ.(ಕೆಲವರು ಮಕ್ಕಳನ್ನು ಒಳಗೆ ಕಳುಹಿಸಿ ಪೂಜೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ದಯಮಾಡಿ ಹಾಗೆ ಮಾಡದೆ ಹೊರಗಿನಿಂದಲೇ ಪೂಜೆ ಮಾಡಿ ನಮಸ್ಕರಿಸಿ) ಅಮಾವಾಸ್ಯೆ ದಿನ ಮಾತ್ರ ವಿಶೇಷ ದರ್ಶನ ನೀಡುವ ಕ್ಷೇತ್ರ, ನಡೆದುಕೊಳ್ಳುವವರು ಸಂಕಲ್ಪ ಮಾಡಿ ೫ ಅಮಾವಾಸ್ಯೆ ಪೂಜೆ ಪೂರೈಸಬೇಕು.

Recent Posts

See All
ವಿಶ್ವಮಾನವ ಸಂದೇಶ ಸಾರಿದವರು ಬಸವಣ್ಣ: ಪ್ರೋ. ಶರಣಬಸಪ್ಪ ಬಿಳಿಯಲೇ

ಕೊಪ್ಪಳ:ಸಮಾನತೆ, ಸ್ವಾಭಿಮಾನ, ಬದುಕನ್ನು ಕಟ್ಟಿಕೊಟ್ಟವರು, ಇವನಾರವ ಇವನಾರವ ಎಂದು ಹೇಳುವುದರ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದವರು ಸಾಂಸ್ಕೃತಿಕ ನಾಯಕ,...

 
 
 

Comments


bottom of page