top of page

ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

  • Writer: newsnowvijayanagar
    newsnowvijayanagar
  • May 22
  • 1 min read

ಗಂಗಾವತಿ : ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹವು ಮಕ್ಕಳಿಗೆ ಉನ್ನತ ಸಾಧನೆ ಮಾಡಲು ಶಕ್ತಿ ನೀಡುತ್ತದೆ ಎಂದು ಚಿನ್ನ ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್ ಅಣ್ಣಪ್ಪ ಶೇಟ್ ಹೇಳಿದರು,


ree

ಚಿನ್ನ ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು, ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾರಟಗಿ ಪಟ್ಟಣದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿ ಅನನ್ಯ ಅಶೋಕ್ ಶೇಟ್ 585 ಅಂಕ ಪಡೆದು ಶೇಕಡ 93.6ರಷ್ಟು ಸಾಧನೆ ಮಾಡಿದ್ದು, ಸಂಘದ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು ಹತ್ತನೇ ತರಗತಿ ಪರೀಕ್ಷೆ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಶೈಕ್ಷಣಿಕ ಜೀವನದಲ್ಲಿ ದೊಡ್ಡ ಮೈಲಿಗಲ್ಲು ಈ ಯಶಸ್ಸು ಭವಿಷ್ಯದ ಕನಸುಗಳಿಗೆ ದೃಢವಾದ ಅಡಿಪಾಯ ಹಾಕುತ್ತದೆ, ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಕಾಯುತ್ತಿವೆ, ಯಾವಾಗಲೂ ನಮ್ಮ ಗುರಿ ಎತ್ತರದಲ್ಲಿ ಇರಿಸಿಕೊಳ್ಳಬೇಕು ಎಂದಿಗೂ ನಿಲ್ಲಿಸಬಾರದು ಎಂದರು,


ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಅಶೋಕ್ ಕುಡೇಕರ್, ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಉದಯ್ ಶೇಟ್, ಮಹಾಬಲೇಶ್, ರವಿ, ಹನುಮಂತ, ಖಲೀಲ್, ಮೆಹಬೂಬ್, ಶ್ರೀಕಾಂತ್, ಪತ್ರಕರ್ತ ಗಣೇಶ್ ಮತ್ತಿತರರು ಇದ್ದರು.

Recent Posts

See All
ವಿಶ್ವಮಾನವ ಸಂದೇಶ ಸಾರಿದವರು ಬಸವಣ್ಣ: ಪ್ರೋ. ಶರಣಬಸಪ್ಪ ಬಿಳಿಯಲೇ

ಕೊಪ್ಪಳ:ಸಮಾನತೆ, ಸ್ವಾಭಿಮಾನ, ಬದುಕನ್ನು ಕಟ್ಟಿಕೊಟ್ಟವರು, ಇವನಾರವ ಇವನಾರವ ಎಂದು ಹೇಳುವುದರ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದವರು ಸಾಂಸ್ಕೃತಿಕ ನಾಯಕ,...

 
 
 

Comments


bottom of page