top of page

ವಿಶ್ವಮಾನವ ಸಂದೇಶ ಸಾರಿದವರು ಬಸವಣ್ಣ: ಪ್ರೋ. ಶರಣಬಸಪ್ಪ ಬಿಳಿಯಲೇ

  • Writer: newsnowvijayanagar
    newsnowvijayanagar
  • May 9
  • 1 min read

ಕೊಪ್ಪಳ:ಸಮಾನತೆ, ಸ್ವಾಭಿಮಾನ, ಬದುಕನ್ನು ಕಟ್ಟಿಕೊಟ್ಟವರು, ಇವನಾರವ ಇವನಾರವ ಎಂದು ಹೇಳುವುದರ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದವರು ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು ಎಂದು ಪ್ರೋ. ಶರಣಬಸಪ್ಪ ಬಿಳಿಯಲೇ ಅಭಪ್ರಾಯಪಟ್ಟರು. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಯದ ಕನ್ನಡ ವಿಭಾಗದಿಂದ ಆಂತರಿಕ ಭರವಶಕೋಶದಡಿಯಲ್ಲಿ ವಿಶ್ವಮಾನವ ಬಸವಣ್ಣನವರ ೮೦೨ನೇ ಜಯಂತೋತ್ಸದ ನಿಮಿತ್ಯ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಜೊತೆಗೆ ವಿಚಾರ ಮತ್ತು ವೈಚಾರಿಕ ಕ್ರಾಂತಿಯನ್ನು ಮಾಡಿದವರು ಬಸವಣ್ಣನವರು. ಬಸವಣ್ಣ ಮತ್ತು ಬಸವಾದಿ ಶರಣರ ವಿಚಾರಧಾರೆಗಳು ಸರ್ವಕಾಲಕ್ಕೂ ಆದರ್ಶವಾಗಿವೆ. ೧೨ನೇ ಶತಮಾನದ ಶರಣ ಶರಣೆಯರ ವಿಚಾರಧಾರೆಗಳನ್ನು ತಾವೆಲ್ಲರೂ ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಯದ ಪ್ರಾಚಾರ್ಯ ಡಾ. ಚನ್ನಬಸವ ಮಾತನಾಡಿ ಬಸವಣ್ಣನವರು ಸಾಮಾಜಿಕ ಸಮಾನತೆಯ ಹರಿಕಾರರಾಗಿದ್ದಾರೆ ಸರ್ವ ಶರಣ-ಶರಣೆಯರ ವಿಚಾರಗಳು ನಮ್ಮ ಬದುಕನ್ನು ಸುಂದರಗೂಳಿಸುತ್ತವೆ. ಇಂತಹ ಶ್ರೇಷ್ಠ ವ್ಯಕ್ತಿಗಳ ಚಿಂತನೆ, ಅಧ್ಯಯನ ನಮಗೆ ಅಗತ್ಯವಾಗಿದೆ. ಇಂತಹ ಕಾರ್ಯುಕ್ರಮಗಳ ಮೂಲಕ ಅವರ ವಿಚಾರಧಾರೆ ಅರಿತು ತಾವೆಲ್ಲರು ಆಚಾರಗೂಳಿಸಬೇಕು ಎಂದರು. ಡಾ. ಅರುಣಕುಮಾರ ಎ.ಜಿ, ಮಂಜುನಾಥ ಹಿರೇಮಠ, ಕನಕಪ್ಪ, ಡಾ, ಮಂಜುನಾಥ ಗಾಳಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಅಮರೇಶ ತವಳಕೇರಿ ಸ್ವಾಗತಿಸಿದರು, ಕು, ಅನುಶಾ ಪ್ರಾರ್ಥಿಸಿದರು, ಡಾ. ಸುಮಲತಾ. ಎಂ, ನಿರೂಪಿಸಿದರು. ಡಾ. ನಾಗರಾಜ ದಂಡೋತಿ ವಂದಿಸಿದರು ಎಂದು ಮಹಾವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments


bottom of page