top of page

ಗುನ್ನಾಳ ಗ್ರಾಮದ ಹತ್ತಿರವಿರುವ ಟ್ರೆಕ್ ಲೇ ಬೇ ನಲ್ಲಿ ಸ್ಟಾಫಿಲೈಝರ್ ಕಳ್ಳತನ.

  • Writer: newsnowvijayanagar
    newsnowvijayanagar
  • Feb 22
  • 1 min read

ಕೊಪ್ಪಳ ತಾಲೂಕಿನ ಗುನ್ನಾಳ ಗ್ರಾಮದ ಹತ್ತಿರ ರಾಷ್ಟೀಯ ಹೆದ್ದಾರಿಯಲ್ಲಿ ರಸ್ತೆ ಬಳಕೆದಾರರ ಅನುಕೂಲಕ್ಕಾಗಿ ಟ್ರಕ್ ಲೇ ಬೇ ನಿರ್ಮಿಸಲಾಗಿದೆ ಮತ್ತು ಅದನ್ನು ಓಎಸ್ಇ ಹುನಗುಂದ ಹೊಸಪೇಟೆ ಹೈವೇಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯವರು ನಿರ್ವಹಣೆ ಮಾಡುತ್ತಿದ್ದು ಕಂಪನಿಯವರು ಅಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಜೊತೆಗೆ ಸ್ಟಾಫಿಲೈಝರ್ ಅಳವಡಿಸಿದ್ದಾರೆ.


ದಿನಾಂಕ ೨೧ ರ ಬೆಳೆಗ್ಗೆ ೧೧ ಘಂಟೆಯ ಸುಮಾರಿಗೆ ರಾಷ್ಟೀಯ ಹೆದ್ದಾರಿಯ ಗಸ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸ್ಟಾಫಿಲೈಝರ್ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.

ವಿದ್ಯುತ್ ಟ್ರಾನ್ಸ್ಫಾರ್ಮರ್ ಜೊತೆಗೆ ಅಳವಡಿಸಲಾದ ಸ್ಟಾಫಿಲೈಝರ್ ಅನ್ನು ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿದ್ದಾರೆ ಮತ್ತು ಇದರಿಂದ ಟೋಲ್ ಕಂಪೆನಿಯವರಿಗೆ ಹಾನಿಯಾಗಿದೆ. ಮತ್ತುಕಳ್ಳತನವಾಗಿರುವ ಕುರಿತು ಶುಕ್ರವಾರದಂದು ಬೇವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಎಂದು ಟೋಲ್ ವ್ಯವಸ್ಥಾಪಕರಾದ ಅವಿನಾಶ್ ಶುಕ್ಲಾ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು.

Comments


bottom of page