top of page

ಏಪ್ರಿಲ್.12 ರಂದು ಹಂಪಿಯಲ್ಲಿ ಜೋಡಿ ಬ್ರಹ್ಮರಥೋತ್ಸವ

  • Writer: newsnowvijayanagar
    newsnowvijayanagar
  • Apr 3
  • 1 min read

ವಿಜಯನಗರ (ಹೊಸಪೇಟೆ),ಏ.02 : ಐತಿಹಾಸಿಕ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಮತ್ತು ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಜೋಡಿ ಬ್ರಹ್ಮರಥೋತ್ಸವ ಏ.12 ರಂದು ಜರುಗಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.


ತಾಲೂಕಿನ ಹಂಪಿಯಲ್ಲಿ ಏಪ್ರಿಲ್ .6 ರಿಂದ ಏಪ್ರಿಲ್.14 ರವರಗೆ ಹಂಪಿ ಜಾತ್ರಾ ಮಹೋತ್ಸವ ಜರುಗಲಿದೆ. ಹಂಪಿ ಕ್ಷೇತ್ರದ ಫೀಠಾಧಿಪತಿಗಳಾದ ಶ್ರೀವಿದ್ಯಾರಣ್ಯ ಭಾರತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಏ.12 ರಂದು ಜೋಡಿ ಬ್ರಹ್ಮ ರಥೋತ್ಸವ ಜರುಗಲಿದೆ. ಶ್ರೀ ಕೃಷ್ಣದೇವರಾಯರು ಅರ್ಪಿಸಿದ ಚಿನ್ನದ ಕೀರಿಟವನ್ನು ಏ.10 ರಿಂದ ಏ.14 ರವರೆಗೆ ಅಲಂಕಾರ ಮಾಡಲಾಗುವುದು. ಆಗಮಿಸದ ಎಲ್ಲಾ ಭಕ್ತಾಧಿಗಳಿಗೆ ಉಚಿತ ಅನ್ನದಾಸೋಹ ಪ್ರಸಾದ ವಿತರಣೆ ಮಾಡಲಾಗುತ್ತದೆ. ಜಾತ್ರಾ ಮಹೋತ್ಸವಕ್ಕೆ ಹಾಗೂ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

コメント


bottom of page