top of page

ಮಾರ್ಕಂಡೇಶ್ವರ ಶಾಲೆ ಬೆಳ್ಳಿಹಬ್ಬ.

  • Writer: newsnowvijayanagar
    newsnowvijayanagar
  • Jan 19
  • 1 min read

ಜಯನಗರ(ಹೊಸಪೇಟೆ)ಜ,19: ನಗರದ ಪದ್ಮಶಾಲಿ ಬಹೂತ್ತಮ ಸಮಾಜ ಸಂಘದ ಮಾರ್ಕಂಡೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯ 25 ನೇ ವಾರ್ಷಿಕೋತ್ಸವ ಮತ್ತು ಬೆಳ್ಳಿಹಬ್ಬ ಸಮಾರಂಭವನ್ನು ಎಂ.ಪಿ.ಪ್ರಕಾಶ ನಗರದ ಶಾಲೆಯ ಆವರಣದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.


ವಿದ್ಯಾಸಂಸ್ಥೆ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳನ್ನು ಲೋಕಾರ್ಪಣೆ ಮಾಡಲಾಯಿತು .ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಎರಡರಲ್ಲೂ ಪ್ರಸ್ತುತ 550 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು 35 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸತತವಾಗಿ ಎಸ್ಸೆಸ್ಸೆಲ್ಸಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಎಲ್ಲಾ ಸಮಾಜದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಓದಿದ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು,ಉನ್ನತ ಹುದ್ದೆಯಲ್ಲಿ ಅಲಂಕರಿಸಿದ್ದಾರೆ ಎಂದು ತಿಳಿಸಿದರು.

ಮಾರ್ಕಂಡೇಶ್ವರ ಪದ್ಮಶಾಲಿ ಗುರುಮಠದ ಪರಮಪೂಜ್ಯ ಪ್ರಭುಲಿಂಗ ಸ್ವಾಮಿಗಳು, ಹಂಪಿ ಗಾಯತ್ರಿ ಪೀಠದ ಪರಮಪೂಜ್ಯ ದಯಾನಂದಪುರಿ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ,ಅಖಿಲ ಭಾರತ ಪದ್ಮಶಾಲಿ ಸಂಘದ ಅಧ್ಯಕ್ಷ ಕಂದಗಡ್ಡ ಸ್ವಾಮಿ,ಡಾ.ಗಿರಿರಾಜ್, ಶಿವಕುಮಾರ್, ನಾಗರಾಜ,ಕಾಶಿ ವಿಶ್ವನಾಥ, ಶಿರವ ರಾಮಚಂದ್ರಪ್ಪ ಎಟ್.ತುಮ್ಮಿನ ಕಟ್ಟೆ, ಅಧ್ಯಕ್ಷರಾದ ಜಯರಾಮ್, ಪದ್ಮಶಾಲಿ ಸಮಾಜದ ಹಿರಿಯ ಮುಖಂಡರು.ಕಂದಗಡ್ಲ ಸ್ವಾಮಿ,ಪೊಚ್ಚಿತಿ ಸೋಮಶೇಖರ್,ರಾಜು ಮಾರ್ಕಂಡಪ್ಪ,ನಾಗೇಂದ್ರ ಪ್ರಸಾದ್,ಶೀಲಾ ಬ್ರಹ್ಮಯ್ಯ, ರುಕ್ಮಿಣಿ ಸಂಗಾ,ಕೆ.ಮಹೇಶ್ ಕುಮಾರ್,



ರವೀಂದ್ರ ಸಗ್ಗಂ , ರೋಹಿಣಿ ವೆಂಕಟೇಶ್, ಪುಲಿಪಾಟಿ.ನಾಗರಾಜ್, ಹಾಗೂ ಪದ್ಮಶಾಲಿ ವಿವಿಧ ಸಂಘಗಳ ಜಿಲ್ಲಾಧ್ಯಕ್ಷರು ಮತ್ತು ಸಮಾಜದ ಅಧ್ಯಕ್ಷರು ಹೊಸಪೇಟೆ ನೇಕಾರ ಸಮಾಜ ಕುಲಬಾಂಧವರು ಭಾಗವಹಿಸಿದ್ದರು.

Comments


bottom of page