top of page

ಶೃಂಗೇರಿ ಶ್ರೀಗಳ ಹೊಸಪೇಟೆ ಪುರ ಪ್ರವೇಶ,

  • Writer: newsnowvijayanagar
    newsnowvijayanagar
  • Jan 22
  • 1 min read

Updated: Jan 23

ಹೊಸಪೇಟೆ ಜ.೨೨ ಶೃಂಗೇರಿ ಸಂಸ್ಥಾನದ ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳು ಪುರ ಪ್ರವೇಶ ಮಾಡಿದ್ದು ಅವರನ್ನು ಹೊಸಪೇಟೆಯ ಶ್ರೀ ವಡಕರಾಯ ಸ್ವಾಮಿ ದೇವಸ್ಥಾನದಿಂದ ಭವ್ಯ ಮೆರವಣಿಗೆಯ ಮೂಲಕ ಶ್ರೀವಾಸವಿ ಕಲ್ಯಾಣ ಮಂಟಪಕ್ಕೆ ಹೊಸಪೇಟೆಯ ಸಕಲ ಭಕ್ತರು ಕರೆತಂದರು, ಶ್ರೀಗಳು ಹೊಸಪೇಟೆಯಲ್ಲಿ ೨೪ರ ವರೆಗೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಇಂದು ವಾಸವಿ ಕಲ್ಯಾಣಮಂಟಪದಲ್ಲಿ ಶ್ರೀಗಳ ಪಾದಪೂಜೆ, ಭಕ್ತಾಧಿಗಳಿಗೆ ಫಲ ಮಂತ್ರಾಕ್ಷತೆ ವಿತರಣೆ ಹಾಗೂ ಶ್ರೀಚಂದ್ರಮೌಳೇಶ್ವರ ಸ್ವಾಮಿಗಳ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ. ಹಾಗೆಯೇ ನಾಳೆ ಶ್ರೀಗಳು ಹಂಪಿಗೆ ತೆರಳಿ ಪಂಪಾ ವಿರುಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಿ ನಂತರ ಸಂಜೆ ೬ ಗಂಟೆಗೆ ಚಿಂತಾಮಣಿ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಆರ್ಶೀವಚನ ನೀಡಲಿದ್ದಾರೆ. ದಿ.೨೪ ರಂದು ಹೊಸೇಟೆಯ ವಿವಿದೆಡೆ ಭೇಟಿ ನೀಡಲಿದ್ದು ; ಪಂತರ ಜಯಂತ ಅವರ ನಿವಾಸದಲ್ಲಿರುವ ಶ್ರೀ ಶಂಕರ ಜ್ಞಾನ ಮಂದಿರದಿoದ ಶ್ರೀ ಶಂಕರಲಿ0ಗ ದೇವಸ್ಥಾನದ ವರೆಗೂ ೧೦೦೮ ಕುಂಬಗಳೊoದಿಗೆ ಭವ್ಯ ಮೆರೆವಣಿಗೆಯ ಮೂಲಕ ತೆರೆಳಲಿದ್ದಾರೆ . ನಂತರ ಹೊಸಪೇಟೆಯಿಂದ ನೇರವಾಗಿ ಪ್ರಯಾಗರಾಜಕ್ಕೆ ಕುಂಬ ಮೇಳದಲ್ಲಿ ಭಾಗವಹಿಸಲು ಜಿಂದಾಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸುತ್ತಿದ್ದಾರೆ. ಶ್ರೀಗಳು ಮೂರು ದಿನಗಳ ಕಾಲ ಪಂತರ ಜಯಂತ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದು ಶ್ರೀಗಳ ವಾಸ ಸ್ಥಳದ ಸುತ್ತಲೂ ಭವ್ಯ ಅಲಂಕಾರ, ರಸ್ತೆಯ ಇಕ್ಕಲಗಳಲ್ಲಿ ದೀಪಾಲಂಕಾರ ಕೈಗೊಂಡಿದ್ದು ಇಡೀ ಪ್ರದೇಶದಲ್ಲಿ ಹಬ್ದದ ವಾತಾವರಣ ನಿರ್ಮಾಣವಾಗಿದೆ.



Comments


bottom of page