top of page

....ಆಕಾಶ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಹಾರ ಮೇಳ,ಹೊಸಪೇಟೆ .....

  • Nov 25, 2024
  • 1 min read

ಹೊಸಪೇಟೆ : (ವಿಜಯನಗರ)ನ,24

ನಗರದ ಆಕಾಶ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ ಶಾಲಾ ಆಹಾರ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ  ಆಕಾಶ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ ಶಾಲಾ ಆಹಾರ ಮೇಳ







ಆಹಾರ ಮೇಳ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾರ್ವಜನಿಕ ನೂರು ಹಾಸಿಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳಾಗದ ಡಾ|| ಹರಿ ಪ್ರಸಾದ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಅವರು ಈ ಒಂದು ಶಾಲಾ ಆಹಾರ ಮೇಳಕ್ಕೆ ಮುಖ್ಯ ಅತಿಥಿಗಳನ್ನಾಗಿ ಸ್ವಾಗತಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದರು. ಮನೆಯಲ್ಲಿ ತಯಾರಿಸಿದ ಆಹಾರದ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು. ಈ ಮೂಲಕ ಮಕ್ಕಳು ತಮ್ಮ ವಿಶೇಷ ಪ್ರತಿಭೆಯನ್ನು ಹೋರಾಹಕಲು ಒಂದು ಅವಕಾಶ ಸಿಕ್ಕಂತಾಗುತ್ತದೆ ಎಂದರು. ಒಟ್ಟು ಪ್ಲೇ ಕ್ಲಾಸಿಂದ ೧೦ನೇ ತರಗತಿವರೆಗೆ ಸುಮಾರು ೨೫೦ ಚಿಕ್ಕ ಚಿಕ್ಕ ಆಹಾರದ ಅಂಗಡಿಗಳನ್ನು ತೆರೆದಿದ್ದನ್ನು ನೋಡಿ ಬಹಳಷ್ಟು ಸಂತೋಷ ವ್ಯಕ್ತಪಡಿಸಿದರು.

ಈ ಒಂದು ಶಾಲಾ ಆಹಾರ ಮೇಳದಲ್ಲಿ ಪ್ಲೇ ಕ್ಲಾಸ್ನಿಂದ ಐದನೇ ತರಗತಿವರೆಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಪೋಷಕರು ಭಾಗವಹಿಸಿದ್ದರು. ಹಾಗೂ ೬ನೇ ತರಗತಿಯಿಂದ ೧೦ನೇ ತರಗತಿವರೆಗೂ ವಿದ್ಯಾರ್ಥಿಗಳು ತಮ್ಮ ಗೆಳೆಯರೊಂದಿಗೆ ಭಾಗವಹಿಸಿದ್ದರು.

ಈ ಒಂದು ಶಾಲಾ ಆಹಾರ ಮೇಳದಲ್ಲಿ ದಲ್ಲಿ ಆಕಾಶ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಎನ್ ಮೊಹಮ್ಮದ್ ಇಮಾನ್ ನಿಯಾಜಿ ರವರು ಶಾಲಾ ಆಹಾರ ಮೇಳವನ್ನು ಉದ್ದೇಶಿಸಿ ಮಾತನಾಡಿ ಇಂದು ಆಕಾಶ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಒಂದು ರೀತಿಯ ಹಬ್ಬದ ವಾತಾವರಣವನ್ನು ನೋಡಬಹುದಾಗಿದೆ ಎಂದರು. ಈ ಒಂದು ಶಾಲಾ ಆಹಾರ ಮೇಳದ ಉದ್ದೇಶವೇನೆಂದರೆ ನಮ್ಮ ಒಂದು ಸಾಂಸ್ಕೃತಿಕ ಆಹಾರ ಪದ್ಧತಿ ಹಾಗೂ ಸ್ಥಳೀಯ ಆಹಾರ ಪದ್ಧತಿ ನಂತರ ಋತುಮಾನಕ್ಕೆ ತಕ್ಕಂತೆ ಆಹಾರ ಪದ್ಧತಿ ಹಾಗೂ ಆಹಾರದಲ್ಲಿನ ವಿಶೇಷ ಗುಣಗಳನ್ನು ಪರಿಚಯಿಸುವ, ಹಾಗೂ ಪೋಷಕಾಂಶ ಭರಿತ ಸತ್ವಯುತ ಆಹಾರ ಹೀಗೆ ಹತ್ತು ಹಲವಾರು ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏನೆಲ್ಲಾ ಮುಂಜಾಗ್ರತೆಯನ್ನು ವಹಿಸಿಕೊಳ್ಳಬಹುದೆಂಬುದನ್ನು ಪ್ರತಿಯೊಬ್ಬರಿಗೂ ತಿಳುವಳಿಕೆ ಮೂಡಿಸಲು ನಮ್ಮ ಒಂದು ಶಿಕ್ಷಣ ಸಂಸ್ಥೆಯ ವಿಶೇಷ ವಿಭಿನ್ನ ಪ್ರಯತ್ನ ವಾಗಿರುತ್ತದೆ ಎಂದರು. ಹಾಗೂ ಶಾಲೆಯ ಆಟ ಪಾಠಗಳೊಂದಿಗೆ ಆಹಾರ ಪದ್ಧತಿಯು ಕೂಡ ಮಕ್ಕಳಿಗೆ ಮೂಲಭೂತ ಶಿಕ್ಷಣವಾಗಬೇಕು, ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಹಾಗೂ ಶಾಲೆಯ ಆಟ ಪಾಠಗಳೊಂದಿಗೆ ಆಹಾರ ಪದ್ಧತಿಯು ಕೂಡ ಮಕ್ಕಳಿಗೆ ಮೂಲಭೂತ ಶಿಕ್ಷಣವಾಗಬೇಕು,  ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.







ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಸಿಬಿಎಸ್ಸಿ ಅಫಿಲಿಯೇಷನ್ ನಂಬರ್ ದೊರಕಿರುವುದನ್ನು ಸಂತೋಷದಿಂದ ಬಹಿರಂಗಪಡಿಸಿದರು.

ಈ ಕಾರ್ಯಕ್ರಮದಲ್ಲಿ ಆಕಾಶ್ ಪಿಯು ಕಾಲೇಜ್ ನ ಕಾರ್ಯದರ್ಶಿಗಳಾದ ಶ್ರೀಮತಿ ಶಾಕಿರಬೇಗಂ ರವರು ಹಾಗೂ ಕಾಲೇಜು ಪ್ರಾಂಶು ಪಾಲರಾದ ಮಹೇಶ್ವರ ಚೌದರಿ ಮತ್ತು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸಂಪದ, ಹಾಗೂ ಉಪನ್ಯಾಸಕರು, ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Comments


bottom of page