top of page

ತಳಸಮುದಾಯಗಳು ಇರುವುದು ಚರಿತ್ರೆಯಲ್ಲಿ ಗುರುತಿಸಬಹುದು: ಡಾ.ಕೆ.ಮೋಹನ್‌ಕೃಷ್ಣ ರೈ.

  • Nov 22, 2024
  • 1 min read

ಹೊಸಪೇಟೆ:(ವಿಜಯನಗರ)ನ,20.

ಕನ್ನಡ ವಿಶ್ವವಿದ್ಯಾಲಯ, ಹಂಪಿ.ಚರಿತ್ರೆ ವಿಭಾಗದ ವತಿಯಿಂದ,ವಿಜಯನಗರ ಕಾಲದ ತಳಸಮುದಾಯಗಳು:ಚರಿತ್ರೆ ಮತ್ತು ಸಂಸ್ಕೃತಿ ಪಾಕ್ಷಿಕ ಮಾತು -೩೯

ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.









ಈ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ಲೋಕೇಶ ಟಿ.ಅವರು ವಿಜಯನಗರ ಕಾಲದ ತಳಸಮುದಾಯಗಳು: ಚರಿತ್ರೆ ಮತ್ತು ಸಂಸ್ಕೃತಿ ಎಂಬ ವಿಷಯ ಕುರಿತು ವಿಚಾರ ಮಂಡಿಸಿದರು.ವಿಜಯನಗರ ಪೂರ್ವ ಮತ್ತು ವಿಜಯನಗರ ನಂತರದ ಕಾಲಘಟ್ಟದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ತಳಸಮುದಾಯಗಳು ಪ್ರಸ್ತುತ ಈ ವೃತ್ತಿ ಸಮುದಾಯಗಳೇ ಜಾತಿಕೇಂದ್ರಿತವಾಗಿ ತಮ್ಮ ಅಸ್ಮಿತೆಯ ಕುರಿತು ವಿಷಯವನ್ನು ಮಂಡಿಸಿದರು.

ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಕೆ.ಮೋಹನ್‌ಕೃಷ್ಣ ರೈ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಳಸಮುದಾಯ ಎನ್ನುವ ಚಾರಿತ್ರಿಕ ಗ್ರಹಿಕೆ ಚರಿತ್ರೆ ರಚನೆಯಲ್ಲಿ ಕಾಣಿಸಿಕೊಂಡ ಮೇಲೆ ಅದರ ಸೈದ್ಧಾಂತಿಕ ನಿರೂಪಣೆ ಗಟ್ಟಿಗೊಂಡಿತು. ಪ್ರತಿ ಚಾರಿತ್ರಿಕ ಕಾಲಘಟ್ಟದಲ್ಲಿ ಶ್ರೀಮಂತ ಸಮಾಜ, ಮಧ್ಯಮ ಸಮಾಜ ಹಾಗೂ ತಳಸಮುದಾಯಗಳು ಇರುವುದು ಚರಿತ್ರೆಯಲ್ಲಿ ಗುರುತಿಸಬಹುದು. ಜೊತೆಗೆ ಈ ತಳಸಮುದಾಯಗಳು ಪ್ರಸ್ತುತದಲ್ಲಿ ಎದುರಿಸುತ್ತಿರುವ ಅಸ್ಮಿತೆಯ ಸಮಸ್ಯೆಗಳ ಕುರಿತು ಅವರು ಅಧ್ಯಕ್ಷೀಯ ನುಡಿಯನ್ನಾಡಿದರು.

ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳು ಚರ್ಚೆ ಮತ್ತು ಸಂವಾದದಲ್ಲಿ ಭಾಗವಹಿಸಿದರು.ಪಾಕ್ಷಿಕ ಮಾತು ಕಾರ್ಯಕ್ರಮದ ಸಂಚಾಲಕರಾದ ಪ್ರದೀಪ್ ಹೆಚ್. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ವಿಭಾಗದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

Comments


bottom of page