top of page

ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನಾಚರಣೆ.

  • Nov 27, 2024
  • 1 min read

ಹೊಸಪೇಟೆ:(ವಿಜಯನಗರ) : ನ್ಯಾಯಾಂಗ ಇಲಾಖೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ದಿನ ಹಮ್ಮಿಕೊಳ್ಳಲಾಗಿತ್ತು.










ಈ ಸಂದರ್ಭದಲ್ಲಿ ಗೌರವಾನ್ವಿತ ಜಿಲ್ಲಾ ಹಿರಿಯ ನ್ಯಾಯಾಧೀಶರಾದ ಶ್ರೀಮತಿ ಹೇಮಲತಾ ಬಿ.ಹುಲ್ಲೂರು. ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳನ್ನು 18 ವರ್ಷದ ಒಳಗೆ ಬಾಲ್ಯ ವಿವಾಹ ಮಾಡಿ ಮದುವೆ ಮಾಡಲಾಗುತ್ತಿದೆ. ವರದಕ್ಷಿಣೆ ಕಿರುಕುಳ ಹಾಗೂ ದೇವದಾಸಿ ಪದ್ಧತಿಗಳು ಇಂತಹ ಹಲವಾರು ಸಮಸ್ಯೆಗಳಿಂದ ಮಹಿಳೆಯರು ದೌರ್ಜನಕ್ಕೆ ಒಳಗಾಗುತ್ತಾರೆ.ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಯುವುದನ್ನು ತಡೆಗಟ್ಟಲು ನ್ಯಾಯ ಒದಗಿಸುವ ಕಾನೂನುಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಗೌರವಾನ್ವಿತ ನ್ಯಾಯಾಧೀಶರಾದ ಚೈತ್ರ.ಗೌರವಾನ್ವಿತ

ನ್ಯಾಯಾಧೀಶರು ಪ್ರಶಾಂತ್ ನಾಗಲಾಪುರ,ಹಾಗೂ ವಿವೇಕಾನಂದ ಪಿ.ಕೆ.ಸಹಾಯಕ ಆಯುಕ್ತರು.ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ

ಪಿ.ಶ್ರೀನಿವಾಸಮೂರ್ತಿ. ಹಾಗೂ

ಶ್ರೀಮತಿ ಸಿಂಧು ಅಂಗಡಿ. ಶಿಶು ಅಭಿವೃದ್ಧಿ ಅಧಿಕಾರಿ.

ಡಾ| ಸಿಂಧೂಜಾ ಎಂ ಸಿ ಎಚ್ ಆಸ್ಪತ್ರೆ.ಹಾಗೂ ಶ್ರೀಮತಿ ಸುಭದ್ರಾದೇವಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಶ್ರೀಮತಿ ಜಯಲಕ್ಷ್ಮಿ ಪಿ.ಎಸ್.ಐ ಗ್ರಾಮಿಣ ಪೋಲಿಸ್ ಠಾಣೆ,

ಶ್ರೀಮತಿ ಬೀಬಿ ಮರಿಯಮ್ ಪಿ.ಎಸ್.ಐ ಮರಿಯಮ್ಮನಹಳ್ಳಿ.

ಶ್ರೀಮತಿ ರಮಾದೇವಿ.ಪಿ.ಎಸ್.ಐ ಹಂಪಿ ಸಂಚಾರಿ ಪೋಲಿಸ್ ಠಾಣೆ.

ಮಿಸ್ ಪುಷ್ಪಲತ ಪ್ಯಾನಲ್ ವಕೀಲರು. ಹಾಗೂ

ಶ್ರೀಮತಿ ಸ್ಮಿತಾ ಹೀರಾಲಾಲ್ ಮೇರವಾಡಿ ಪ್ಯಾನಲ್ ವಕೀಲರು.

ನ್ಯಾಯಾಂಗ ಇಲಾಖೆ ನೌಕರರು,ಸಿಬ್ಬಂದಿ ವರ್ಗದವರು ಇದ್ದರು.

Comments


bottom of page