top of page

ರಾಜ್ಯೋತ್ಸವ ಕವಿಗೋಷ್ಟಿ : ಸಾಧಕರಿಗೆ ಸನ್ಮಾನ.

  • Nov 25, 2024
  • 1 min read

ವಿಜಯನಗರ (ಹೊಸಪೇಟೆ) :ನ,25 ನಗರದ ಅಮರಾವತಿಯಲ್ಲಿರುವ ಬಾಲಕೀಯರ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಭಾನುವಾರ ಸಾಹಿತ್ಯ ಬಳಗದಿಂದ, ರಾಜ್ಯೋತ್ಸವ ಕವಿಗೋಷ್ಠಿ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.








ಕಾರ್ಯಕ್ರಮ ಉದ್ಘಾಟಿಸಿ ಲೇಖಕಿ ಡಾ.ಸುಲೋಚನಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯಗಳ ಕುರಿತಂತೆ ಕಾರ್ಯಕ್ರಮ ಹಮ್ಮಿಕೊಳ್ಳವುದೇ ಕಷ್ಟದ. ಕೆಲಸವಾಗಿದ್ದು, ಇಂಥಹ ಸಂಧರ್ಭದಲ್ಲಿ ಸಾಹಿತ್ಯಾಸಕ್ತರನ್ನು ಸೇರಿಸುವುದು ಸಹ ಸವಾಲಿನ ಕೆಲಸವಾಗಿದೆ.ಈ ನಿಟ್ಟಿನಲ್ಲಿ ಕನ್ನಡಿಗರು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.

ಬಳ್ಳಾರಿ ಶ್ರೀಕೃಷ್ಣದೇವರಾಯ ವಿ.ವಿ.ಯ ಸಿಂಡಿಕೇಟ್ ಸದಸ್ಯ ಬಿ.ಪೀರಭಾಷಾ ಮಾತನಾಡಿ, ಕವಿಗಳು ಕವನ ಸಂಕಲನಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಈ ಹಿಂದೆ ಹಿರಿಯ ಸಾಹಿತಿಗಳು ತಮ್ಮ ಕವನಗಳನ್ನು ಓದಿ ತಿದ್ದಿ ತೀಡಿ, ಪುನರ್ಮನನ ಮಾಡಿಕೊಂಡು ಅದ್ಬುತವಾದ ಕಾವ್ಯವನ್ನು ರಚಿಸುತ್ತಿದ್ದರು. ಅದರಂತೆ ಯುವ ಕವಿಗಳು ಸಹ ಕಾವ್ಯ ರಚಿಸುವ ಜೊತೆಗೆ ಕಿವಿಗೊಟ್ಟು ಕೇಳಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಿದೆ. ಕನ್ನಡ ಭಾಷೆಯು ಬೇರೆ ಬೇರೆ ಭಾಷೆಗಳ ಪದಗಳನ್ನು ಎರವಲು ಪಡೆದುಕೊಂಡು ಅತ್ಯಂತ ಬಲಿಷ್ಠವಾಗಿದೆ ಎಂದು ಹೇಳಿದರು.










ಉಪನ್ಯಾಸಕ ಡಾ.ದಯಾನಂದ ಕಿನ್ನಾಳ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ 1ಕ್ಕೆ ಸೀಮಿತವಾಗದೇ ಕನ್ನಡವನ್ನು ಕಟ್ಟುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ

ಜೆ.ಎಂ.ವೀರಸಂಗಯ್ಯ ಮತ್ತು ನಾರಾಯಣಪ್ಪ, ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇಟ್ಟಂಗಿ ರಹಮಾನ್ ಸಾಬ್ ,ಹಾಗೂ ತಾಯಪ್ಪ ಇವರನ್ನು ಸನ್ಮಾನಿಸಲಾಯಿತು.

ಹಿರಿಯ ಲೇಖಕಿ ನೂರ್ ಜಹಾನ್, ಯುವ ಕವಿ

ವಿಶಾಲ ಮ್ಯಾಸರ್, ನಗರಸಭೆ ಪೌರ ಕಾರ್ಮಿಕರಾದ,ಸುಂಕಮ್ಮ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು

ಈ ಸಂಧರ್ಭದಲ್ಲಿ ಶಿಕ್ಷಕಿ ಡಾ.ಟಿ.ಎಂ. ಉಷಾರಾಣಿ, ರೈತ ಮುಖಂಡರಾದ ಗಂಟಿ ಸೋಮಶೇಖರ್ ಶಿಕ್ಷಣ ಇಲಾಖೆಯ ಸಿ.ಆರ್.ಪಿ..ನಾಗರಾಜ ಎನ್. ಕವಿಗಳಾದ ಡಾ.ಯತ್ನಳ್ಳಿ ಮಲ್ಲಯ್ಯ, ಹೆಚ್.ಎಂ.ಜಂಬುನಾಥ, ಸೋಮಶೇಖರಯ್ಯ ಹಿರೇಮಠ, ಜಿ.ಎರಿಸ್ವಾಮಿ, ಶ್ರೀನಿವಾಸ ಪುರೋಹಿತ್, ವೈಯಮುನಪ್ಪ ವಿಶ್ವನಾಥ ಕವಿತಾಳ, ಮುದೇನೂರು ಉಮಾಮಹೇಶ್ವರ, ವಿ.ಪರಶುರಾಮ, ಶೀಲಾ ಬಡಿಗೇರ, ಕ್ಯಾದಿಗಿಹಾಳ ಉದೇದಪ್ಪ, ವೆಂಕಟೇಶ ಬಡಿಗೇರ, ಹಾಲ್ಯಾ ನಾಯ್ಕ, ರೇಖಾ ಕನ್ನಡತಿ, ಶೋಭಾ ಶಂಕರಾನಂದ, ಅನುಪಮ ಸುಲಾಖೆ, ಗೋವಿಂದಪ್ಪ, ಜಗದೀಶ ಬೆನ್ನೂರು ಇದ್ದರು.

Comentários


bottom of page