top of page

ವಿಜಯನಗರ ಜಿಲ್ಲಾಮಟ್ಟದ ಯುವಜನೋತ್ಸವ: ಹೆಸರು ನೊಂದಾಯಿಸಲು ಸೂಚನೆ

  • Nov 22, 2024
  • 2 min read

ವಿಜಯನಗರ (ಹೊಸಪೇಟೆ), ನವೆಂಬರ್ ೨೦ (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಹಮ್ಮಿಕೊಂಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ಬಾಗವಹಿಸಲಿಚ್ಚಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಇಲಾಖೆ ಪ್ರಕಟಣೆ ನೀಡಿದೆ.


ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಮಂತ್ರಾಲಯವು ರಾಷ್ಟ್ರ ಮಟ್ಟದ ಯುವಜನೋತ್ಸವವನ್ನು ಪ್ರತಿ ವರ್ಷ ಜನವರಿ ಮಾಹೆಯಲ್ಲಿ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿಜೇತ ಸ್ಪರ್ಧಾಳುಗಳ ತಂಡವನ್ನು ಕಳುಹಿಸುವ ಸಲುವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ, ಅದರಂತೆ ೨೦೨೪-೨೫ನೇ ಸಾಲಿನ ವಿಜಯನಗರ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನವೆಂಬರ್ ೨೯ರಂದು ಜಿಲ್ಲಾ ಕ್ರೀಡಾಂಗಣದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗುತ್ತಿದೆ.

ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ೧೫ ರಿಂದ ೨೯ವರ್ಷ ವಯೋಮಾನದೊಳಗಿನ ಯುವಜನರನ್ನು ಮಾತ್ರ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ಪರಿಗಣಿಸಲಾಗುವುದು. ಸದರಿ ಕಾರ್ಯಕ್ರಮವು ಮುಕ್ತವಾಗಿ ಮೇಲೆ ತಿಳಿಸಿದ ವಯೋಮಿತಿಯೊಳಗಿನ ಯುವಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧೆಗಳ ವಿವರ: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ವಿಷಯಾಧಾರಿತ ಸ್ಪರ್ಧೆಗಳು (ವರ್ಕಿಂಗ್ ಮಾಡೆಲ್) ವಯಕ್ತಿಕ ಮತ್ತು ಗುಂಪು, ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ತಂಡ ಹಾಗೂ ವೈಯಕ್ತಿಕ ಜನಪದ ನೃತ್ಯ (೧+೪=೫ಜನರು), ಜನಪದ ಗೀತೆ (೧+೪=೫ಜನರು) ಗುಂಪು (೧೦ಜನರು), ಜೀವನ ಕೌಶಲ್ಯ ವಿಭಾಗದಲ್ಲಿ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ಕವಿತೆ (೧೦೦೦ ಪದಗಳಿಗೆ ಮೀರದಂತೆ) ಬರೆಯುವ ಮತ್ತು ಕಥೆ ಬರೆಯುವ ಸ್ಪರ್ಧೆ ಇರುತ್ತದೆ. ಚಿತ್ರಕಲೆ ಸ್ಪರ್ಧೆ ವಯಕ್ತಿಕ.

ಆಯ್ದ ವಿಷಯಗಳ ಬಗ್ಗೆ ೩ ನಿಮಿಷಗಳ (ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮತ್ತು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದವರೆಗೆ ಕನ್ನಡ ಭಾಷೆಯನ್ನು ಸೀಮಿತಗೊಳಿಸಿ) ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನ.೨೯ರಂದು ಬೆಳಿಗ್ಗೆ ೮.೩೦ ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಆಡಿಟೋರಿಯಂ ಹಾಲನಲ್ಲಿ ಆಯೋಜಿಸಲಾಗಿದ್ದು, ೧೫ ರಿಂದ ೨೯ ವರ್ಷ ವಯೋಮೊತಿಯೊಳಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳಬಹುದು. ಭಾಗವಹಿಸುವ ಆಸಕ್ತರು ನ. ೨೭ರ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಪುಸ್ತಕದ ನಕಲು ಪ್ರತಿಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ವಿಶೇಷ ಸೂಚನೆ: ವಿಜೇತ ತಂಡ ಮತ್ತು ವಯಕ್ತಿಕ ಸ್ಪರ್ಧೆ ವಿಜೇತರಿಗೆ ನಿಯಮಾನುಸಾರ ನಗದು ಪುರಸ್ಕಾರ ನೀಡಲಾಗುವದು (ಒಟ್ಟು ೬೦ ಸಾವಿರ ನಗದು ಬಹುಮಾನ) ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ಹಾಗೂ ಪ್ರಯಾಣ ಭತ್ಯೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆ ಜಗದೀಶ ಹಿರೇಮಠ ಮೊ.ಸಂ: ೯೪೮೩೪೮೦೧೦೧, ಮೋಂಟು ಪತ್ತಾರ ನೆಹರು ಯುವ ಕೇಂದ್ರ ಮೊ: ೯೦೪೯೪೮೭೦೨೭ ಮತ್ತು ಗುಂಡಿ ರಮೇಶ ಜಿಲ್ಲಾಧ್ಯಕ್ಷರು ಮೊ : ೯೧೬೪೭೦೦೦೩೬, ಮಂಜುನಾಥ ಗೊಂಡಬಾಳ ವಿಭಾಗೀಯ ಸಂಚಾಲಕರು ಮೊ : ೯೪೪೮೩೦೦೦೭೦ ರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಗ್ರೇಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments


bottom of page