top of page

ಶಾಸಕ ಹೆಚ್ .ಆರ್. ಗವಿಯಪ್ಪ ಅವರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ.

  • Nov 25, 2024
  • 1 min read

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ದಿನಾಂಕ 25-11-2024 ರಂದು ಎರಡು ಮಹತ್ವದ ರಸ್ತೆ ಅಭಿವೃದ್ಧಿ ಯೋಜನೆಗಳ ಭೂಮಿಪೂಜೆ ಕಾರ್ಯಕ್ರಮವನ್ನು ಶಾಸಕರಾದ ಹೆಚ್. ಆರ್. ಗವಿಯಪ್ಪ ಅವರು ಉದ್ಘಾಟಿಸಿದರು.











ಈ ಯೋಜನೆಗಳಡಿ ಬೈಲುವದ್ಧಿಗೇರಿಯಿಂದ ಹೊಸ ಚಿನ್ನಾಪುರ ರಸ್ತೆ (6.90 ಕಿ.ಮೀ.) ಮತ್ತು ಚಿತ್ತವಾಡಗಿಯಿಂದ ಇಪ್ಪಿತೇರಿ ರಸ್ತೆ (4.00 ಕಿ.ಮೀ.) ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಒಟ್ಟು ₹20.24 ಕೋಟಿ ವೆಚ್ಚದಲ್ಲಿ ಈ ಯೋಜನೆಗಳು ತಾಲ್ಲೂಕಿನ ಜನತೆಗೆ ಸುಧಾರಿತ ಸಾರಿಗೆ ಸಂಪರ್ಕವನ್ನು ಕಲ್ಪಿಸಿ ಕೊಡಲಿದೆ.

ಶಾಸಕ

ಹೆಚ್ .ಆರ್.ಗವಿಯಪ್ಪ ಅವರಿಂದ ಕಾಲುವೆ ಕಾಮಗಾರಿಗೆ ಚಾಲನೆ ವಿಜಯನಗರ, ಹೊಸಪೇಟೆ.


ತಾಲೂಕಿನ ಬೆಲ್ಲ ಕಾಂಕ್ರೀಟ್ ಕಾಲುವೆಯ 2.20 ಕಿ.ಮೀ.ದಿಂದ 3.20 ಕಿ.ಮೀ.ವರೆಗೆ ನಡೆಯುವ ಅಧುನೀಕರಣ ಕಾಮಗಾರಿಗೆ ಶಾಸಕರಾದ ಹೆಚ್.ಆರ್. ಗವಿಯಪ್ಪ ಅವರು ಭೂಮಿ ಪೂಜೆ ನೆರವೇರಿಸಿ, ಯೋಜನೆಗೆ ಚಾಲನೆ ನೀಡಿದರು.


ಈ ಯೋಜನೆ ರೂ. 740.00 ಲಕ್ಷ ವೆಚ್ಚದಲ್ಲಿ ಜಲಸಂಪನ್ಮೂಲ ಇಲಾಖೆ (ಕೆಎನ್‌ಎನ್‌ಎಲ್), ಟಿ.ಆರ್. ಡಿವಿಶನ್, ಮುನಿರಾಬಾದ್ ಮೂಲಕ ಕೈಗೆತ್ತಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಅಧಿಕಾರಿಗಳು, ಹಿರಿಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Comments


bottom of page